'ಕೇವಲ ಎಂಟನೇ ತರಗತಿ ಓದಿದ ನಿಮ್ಮಿಂದ ಈ ತರಹದ ಮೂರು ಸಾವಿರ ಹಾಡುಗಳು ,
''ಕೇವಲ ಎಂಟನೇ ತರಗತಿ ಓದಿದ ನಿಮ್ಮಿಂದ ಈ ತರಹದ ಮೂರು ಸಾವಿರ ಹಾಡುಗಳು , ಇಪ್ಪತ್ತನಾಲ್ಕು ನಾಟಕಗಳು ಬರೆಯಲು ಸಾಧ್ಯವಾದುದಾದರೂ ಹೇಗೆ?'' ನಮ್ಮ ಆಶ್ಚರ್ಯದ ಪ್ರೆಶ್ನೆಗೆ ಅವರು ಆಕಾಶ ತೋರಿಸುತ್ತಾ ''ಎಲ್ಲಾ ಆ ಕಲಾ ದೇವಿಯ ಮಹಿಮೆ , ನಾನು ಆ ಸರಸ್ವತಿ ಮಾತೆಯ ಆರಾಧಕ, ಆಕೆ ನನ್ನಿಂದ ಅವಳಿಗೆ ತೋರಿದ್ದನ್ನು ಬರೆಸಿದಳು !''
ನಮಗೆ ಕಾಳಿಯಿಂದ ಬೀಜಾಕ್ಷರ ಬರೆಸಿಕೊಂಡ ಕಾಳಿದಾಸನ ನೆನಪಾಯ್ತ. ಕಾಕತಾಳೀಯ ಎಂಬಂತೆ ಇವರ ಹೆಸರೂ ಭೋಜ . ಬೊಕ್ಕ ಪಟ್ಣದ ಭೋಜ ಸುವರ್ಣ ಬರ್ಕೆ .
ತುಳು ಚಿತ್ರರಂಗದ ಇತಿ ಹಾಸದಲ್ಲಿ 19 ಫೆಬ್ರವರಿ 1971 ರಲ್ಲಿ ಮಂಗಳೂರು ಸೆಂಟ್ರಲ್ ಚಿತ್ರ ಮಂದಿರದಲ್ಲಿ ಬಿಡುಗಡೆಗೊಂಡ ಮೊದಲ ಚಿತ್ರ 'ಎನ್ನ ತಂಗಡಿ'ಯ ''ಮನಸ್ ನಿರ್ಮಲ ದೀದ್ ಬದುಕುಂಡ ಅವ್ವೆ ಒಂಜಿ ಮಂದಿರಾ'' ಹಾಡಿನ ಸಾಹಿತ್ಯ ಬರೆದವರು . ಅದರ ಇನ್ನೊಂದು ಹಾಡನ್ನು ಬರೆದವರು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು. ತಾಂತ್ರಿಕವಾಗಿ ಸಾಧಾರಣವಾಗಿದ್ದ ಸಿನಿಮಾ ಚಿತ್ರ ಮಂದಿರದಲ್ಲಿ ಜಾಸ್ತಿ ದಿನದ ಓಡದೆ ನಿರ್ಮಾಪಕರಿಗೆ ಸೋಲುಣಿಸಿದ್ದರಿಂದ ಇಂದಿಗೂ ಆ ಚಿತ್ರದ ಹಾಡುಗಳು ಜನರಿಗೆ ಕೇಳುವುದಕ್ಕೆ ಲಭ್ಯವಿಲ್ಲ.
ಭೋಜ ಸುವರ್ಣ ಅವರು ಹುಟ್ಟಿದ್ದು ತಾಯಿ ಅಕ್ಕಮ್ಮ ಸುವರ್ಣ ಅವರ ಊರು ಉಡುಪಿಯ ಉದ್ಯಾವರದಲ್ಲಿ . ತಂದೆ ಗಣಪ ಸಾಲಿಯಾನ್ ಬೊಕ್ಕ ಪಟ್ಣದವರಾದ್ದರಿಂದ ಅಲ್ಲಿಯೇ ಒಂದು ಹೇರ್ ಕಟಿಂಗ್ ಸೆಲೂನ್ ಇಟ್ಟುಕೊಂಡಿದ್ದರು . ಮಕ್ಕಳು ಕಲಿಯಬೇಕು ಎನ್ನುವ ಆಸೆಯಿಂದ ಬಾಸೆಲ್ ಮಿಷನ್ ಶಾಲೆಗೆ ಸೇರಿಸಿದರಾದರೂ ಬಡತನ ಅವರ ಶಾಲಾ ಕಲಿಕೆಯನ್ನು ಎಂಟನೇ ತರಗತಿಯವರೆಗೆ ಮಾತ್ರ ಮುಂದುವರಿಯಲು ಸಾಧ್ಯ ಮಾಡಿತು.
ನಂತರ ಎಲ್ಲ ಬಡ ಮಕ್ಕಳಂತೆ ಭೋಜ ಸುವರ್ಣ ಕೂಡಾ ಗ್ಯಾರೇಜಿನ ಕೆಲಸದಲ್ಲಿ ಜೀವನ ಹುಡುಕುವ ಪ್ರಯತ್ನ ಆರಂಭಿಸಿದರು.
ಶಾಲೆಯ ವಾರ್ಷಿಕೋತ್ಸವದಲ್ಲಿ ತಾನೇ ಬರೆದು ಬಣ್ಣ ಹಚ್ಚಿದ ನಾಟಕ ಅವರಲ್ಲಿ ಕಲಾವಂತಿಕೆಯ ಬೀಜ ಬಿತ್ತಿ ಅದು ಮೊಳಕೆಯೊಡೆಯಲು ಹಾತೊರೆಯುತ್ತಿತ್ತು . ಆ ಸಮಯದಲ್ಲಿ ಸಿಕ್ಕವರು ಕಡಂದಲೆ ನಾರಾಯಣ ಟೈಲರ್. ಮುಂದೆ ಅವರ ಜೊತೆಗೆ ಹಲವಾರು ನಾಟಕಗಳಲ್ಲಿ ಸಹಾಯಕರಾಗಿ , ಸಾಹಿತ್ಯ , ಸಂಭಾಷಣೆ ಬರೆಯುತ್ತಾ ಸಣ್ಣ ಸಣ್ಣ ಪಾತ್ರಗಳಲ್ಲಿಅಭಿನಯಿಸುತ್ತಾ ನಾಟಕದ ಗೀಳನ್ನು ಜೀವಂತವಾಗಿರಿಸಿದರು ಬಿ.ಭೋಜ ಸುವರ್ಣ .
Comments
Post a Comment