ಮಾರ್ಚ್ 15 ರಂದು ಯುವ ಬ್ರಿಗೇಡ್ ಮತ್ತು ಐಲೇಸಾ ಸಹಯೋಗದಲ್ಲಿ ಸಿಂಹದ ಮರಿ ಚಾವಾ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜನ್ಮ ಸಂಸ್ಮರಣೆ.
ಮಾರ್ಚ್ 15 ರಂದು ಯುವ ಬ್ರಿಗೇಡ್ ಮತ್ತು ಐಲೇಸಾ ಸಹಯೋಗದಲ್ಲಿ ಸಿಂಹದ ಮರಿ ಚಾವಾ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜನ್ಮ ಸಂಸ್ಮರಣೆ.
------------------------------------------------
ದೇಶ ಸೇವೆಯಲ್ಲಿ ಹುತಾತ್ಮನಾದ NSG ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ನಲ್ವತ್ತ ಎಂಟನೆ ಹುಟ್ಟು ಹಬ್ಬವನ್ನು ಯುವ ಬ್ರಿಗೇಡ್ ಮತ್ತು ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ). ಸಂಸ್ಥೆ ಸೇರಿಕೊಂಡು ಮಾರ್ಚ್ ಹದಿನೈದರಂದು ಅವರ ಮನೆಯಲ್ಲಿ ಆಚರಿಸಲಿದ್ದಾರೆ. ಆ ದಿನ ಬೆಳಿಗ್ಯೆ 9:30ಯಿಂದ ಅರಂಭಿಸಿ ಚಿಂತಕ , ವಾಗ್ಮಿ ಯುವ ಬ್ರಿಗೇಡ್ ನ ರೂವಾರಿ ಚಕ್ರವರ್ತಿ ಸೂಲಿಬೆಲೆ ಯವರ ನೇತೃತ್ವದಲ್ಲಿ ಐಲೇಸಾ ತಂಡ ಗಾಯನ ಮತ್ತು ಮಂಥನದ ಮೂಲಕ ದೇಶಕ್ಕೆ ಸದಾ ಕಾವಲಾಗಿರುವ ವೀರ ಯೋಧರ ಸ್ಮರಣೆ ಮತ್ತು ಸನ್ಮಾನಗಳ ಜೊತೆಗೆ ವಿಶಿಷ್ಟವಾಗಿ ಆಚರಿಸಲಿದೆ.
ಕಾರ್ಯಕ್ರಮದಲ್ಲಿ ಪ್ಯಾರಾಟ್ರೂಪರ್ ಕಮಾಂಡೊ ರವಿ ಎಂ. ಕೆ , ಮತ್ತು ಮೈಸೂರಿನ ವೀರ ಯೋಧ ಬಿ ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ತಮ್ಮ ಸೇನಾ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸಂದೀಪ್ ಉನ್ನಿ ಕೃಷ್ಣನ್ ಮತ್ತು ವೀರ ಯೋಧರ ತ್ಯಾಗವನ್ನು ಸ್ಮರಿಸಲಿದ್ದಾರೆ . ಮೇಜರ್ ಸಂದೀಪ್ ಅವರ ತಾಯಿ ತಂದೆ ಧನಲಕ್ಷ್ಮಿ ಮತ್ತು ಉನ್ನಿ ಕೃಷ್ಣನ್ ಅವರ ಸಮಕ್ಷಮದಲ್ಲಿ ಐಲೇಸಾ ತಂಡದ ಗಾಯಕರುಗಳಾದ ಡಾ. ರಮೇಶ್ಚಂದ್ರ , ಸುಧಾಕರ್ ಶೆಟ್ಟಿ , ಡಾ. ಸುಶೀಲಾ , ಸುಮಾ ಕೋಟೆ , ಆತ್ಮರಾಮ್ ಆಳ್ವಾ , ನಟ ಮತ್ತು ಟಿವಿ ಮಾಧ್ಯಮ ಪತ್ರಕರ್ತ ರಾಘವ ಸೂರ್ಯ ಸಾಂದರ್ಭಿಕ ಹಾಡುಗಳನ್ನು ಹಾಡಲಿದ್ದಾರೆ .
ಕಾರ್ಯಕ್ರಮವನ್ನು ಯುವ ಬ್ರಿಗೇಡ್ ಸಂಚಾಲಕರಾದ ಪಂಚಾಕ್ಷರಿ ಮತ್ತು ಶ್ರೀ ಭಾಸ್ಕರ್ ಸಂಯೋಜಿಸಿದ್ದು ಐಲೇಸಾದ ಗೋಪಾಲ್ ಪಟ್ಟೆ , ಪ್ರಕಾಶ್ ಪಾವಂಜೆ ತಾಂತ್ರಿಕ ನಿರ್ವಹಣೆಯಲ್ಲಿ ಅನಂತ್ ಕಾಯಕ್ರಮ ನಿರ್ವಹಿಸುತ್ತಾರೆ , ವಿವೇಕ್ ಮಂಡೆಕರ , ಅಜೇಶ್ ಚಾರ್ಮಾಡಿ , ವಿಶ್ವನಾಥ್ ಶೆಟ್ಟಿ ಶಾಂತಾರಾಮ್ ಶೆಟ್ಟಿ ಸಹಕರಿಸಲಿದ್ದಾರೆ.
ಕಾರ್ಯಕ್ರಮವು ಯಲಹಂಕದ ಹಾರೋಹಳ್ಳಿಯ ಇಸ್ರೋ ಆಕಾಶ್ ವಿಹಾರ್ ಲೇಔಟ್ ನಲ್ಲಿರುವ ಮೇಜರ್ ಸಂದೀಪ್ ಮೆಮೋರಿಯಲ್ ಟ್ರಸ್ಟ್ ಅಂಗಳದಲ್ಲಿ ನಡೆಯಲಿದ್ದು ದೇಶ ಪ್ರೇಮಿಗಳಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ಮುಂಬೈ ಐಲೇಸಾ ಸಂಚಾಲಕ ಸುರೇಂದ್ರ ಮಾರ್ನಾಡ್ ತಿಳಿಸಿದ್ದು ಹೆಚ್ಚಿನ ವಿವರ ಬೇಕಿದ್ದಲ್ಲಿ 9916129570/ 9620819037/9986019293 ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ತಿಳಿದು ಕೊಳ್ಳಬಹುದು
Comments
Post a Comment