ಚಿತ್ರ: ಮಾನವ ದಾನವ (೧೯೮೫/1985)
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ರಮೇಶ್ ನಾಯ್ಡು
ಹಾಡಿದವರು: ಎಸ್.ಪಿ.ಬಿ.
ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ
ಈ ಸುದಿನ ನಿನ್ನ ಜನುಮದಿನ
ಹಳೆಯದು ಮರೆಯಲಿ ಹೊಸತಿನಲಿ
ಈ ಜೀವನ ನಲಿಯಲಿ ಹರುಷದಲಿ
ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ
ಈ ಸುದಿನ ನಿನ್ನ ಜನುಮದಿನ
ನಿಮ್ಮಯ ಪ್ರೀತಿ ಹೂವಿನ ರೀತಿ
ಅಂಧಗೆ ಕಣ್ಣನು ತೆರೆಸುವ ಜ್ಯೋತಿ
ನಿಮ್ಮಯ ಪ್ರೀತಿ ಹೂವಿನ ರೀತಿ
ಅಂಧಗೆ ಕಣ್ಣನು ತೆರೆಸುವ ಜ್ಯೋತಿ
ಕಲ್ಲಿನ ಮನಸನು ಕರಗಿಸೊ ಕುಲುಮೆ
ಪಾಪವ ತೊಳೆವುದು ಪ್ರೀತಿಯ ಚಿಲುಮೆ
ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ
ಈ ಸುದಿನ ನಿನ್ನ ಜನುಮದಿನ
ಪ್ರೀತಿಯು ಇಲ್ಲದ ಬಾಳಿನ ಹಾಡು
ದೇವರು ಇಲ್ಲದ ಗುಡಿಯದು ನೋಡು
ಪ್ರೀತಿಯು ಇಲ್ಲದ ಬಾಳಿನ ಹಾಡು
ದೇವರು ಇಲ್ಲದ ಗುಡಿಯದು ನೋಡು
ನಿಮ್ಮನು ನೀಡಿತು ದೈವವು ನನಗೆ
ನನ್ನಯ ಪ್ರಾಣವು ಮೀಸಲು ನಿಮಗೆ
ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ
ಈ ಸುದಿನ ನಿನ್ನ ಜನುಮದಿನ
ಹಳೆಯದು ಮರೆಯಲಿ ಹೊಸತಿನಲಿ
ಈ ಜೀವನ ನಲಿಯಲಿ ಹರುಷದಲಿ
ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ
ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ
ಈ ಸುದಿನ ನಿನ್ನ ಜನುಮದಿನ
ಸಂತೋಷದ ಶುಭ ಸುದಿನ
ಈ ಸುದಿನ ನಿನ್ನ ಜನುಮದಿನ
Comments
Post a Comment