ಅಂದು ರೈಲ್ವೆ ಹಳಿಯ ಪಕ್ಕದಲ್ಲಿ ಬರಿಗಾಲಲ್ಲಿ  ಈ ಸಂತ  ನಡೆದಿದ್ದು  ಬರೋಬ್ಬರಿ   15.5  ಕಿಲೋಮೀಟರ್ . 

 ಮಂಗಳೂರಿನ ಬಂದರಿನ ಗ್ಯಾರೇಜೊಂದರಲ್ಲಿ  ಮೈಕ್ಯನಿಕ್ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ ಆತನಿಗೆ ನಾಟಕದ ವಿಪರೀತ ಗೀಳು . ತುಳು ಭಾಷೆಯಲ್ಲಿ ಹೇಳುವುದಾದರೆ  ''ಗುಣ ಆವಂದಿನ ಮರ್ಲ್!''

'' ಕೊಂಡಾಣಡ್  ಇನಿ ''ತಮ್ಮಲೆ  ಅರ್ವತ್ತನ ಕೋಲ''    ನಾಟಕ ಉಂಡು ,  ಭೂತ  ದರ್ಶನದ ಕೆಂಪು ಅಂಗಿ  ಅಲ್ಪ ಅಂಗಡಿಡ್  ದೀತೆ . ಕೆಲಸ ಮುಗಿದ್  ಬನ್ನಗ  ಆ ಡ್ರೆಸ್ ಪತ್ತೊಂದು  ಸರಿ ಆಜಿ ಗಂಟೆಗ್  ರೈಲ್ವೆ ಸ್ಟೇಷನ್ ಗ್  ಬಲ್ಲ  ಎಂಕುಲು ಅಲ್ಪ ಕಾತೊಂದು ಉಪ್ಪುವ '' 

 ಕಡಂದಲೆದ ನಾರಾಯಣ ಟೈಲರ್   ಹೀಗಂದಾಗ  ತಲೆಯಾಡಿಸಿದವನಿಗೆ  ಆವತ್ತು ಗ್ಯಾರೇಜಿನ ಧಣಿ  ಕೆಲಸ  ಬಿಡುವಾಗ  ಸ್ವಲ್ಪ ತಡ ಮಾಡಿದರು . 

ಗಡಿಬಿಡಿಯಲ್ಲಿ  ಅವರು ಹೇಳಿದ  ಬಟ್ಟೆ  ಹಿಡಿದು  ರೈಲ್ವೆ ಸ್ಟೇಷನ್ ಗೆ   ಓಡೋಡಿ ಬಂದವನಿಗೆ  ಆಗ ತಾನೇ ಸ್ಟೇಷನ್ ಬಿಟ್ಟು  ಒಂದಷ್ಟು ಫರ್ಲಾಂಗು ದೂರದಲ್ಲಿ  ಹೋಗುತ್ತಿರುವ  ರೈಲು  ಕಾಣಿಸಿ ತಲೆ ತಿರುಗಿ  ಬಂತು!

ಮಾಡೋದೇನು? 

ಆ ದಿನಕ್ಕೆ ಇನ್ನು ಯಾವ ರೈಲೂ ಇಲ್ಲ!  ಬೇರೆ ರೀತಿಯ ವ್ಯವಸ್ಥೆಯಲ್ಲಿ ಹೋಗಲು  ಕೈಯಲ್ಲಿ ಚಿಕ್ಕಾಸು ಇಲ್ಲ !. 

 ಅಲ್ಲಿಯೇ ಇದ್ದ ಕೂಲಿಯವರೊಬ್ಬರು ರೈಲ್ವೆ ಹಳಿಯ  ಪಕ್ಕದಲ್ಲೇ ನಡೆದುಕೊಂಡು ಹೋದರೆ  ಸೀದಾ ಕೊಂಡಾಣಕ್ಕೆ  ಹೋಗಬಹುದು ಎಂದು ಸಲಹೆ  ನೀಡಿದರು . 

ಯುವಕ ಯೋಚಿಸದೆ ನಡಿಗೆಗೆ ಸುರುವಿಟ್ಟ . ಎಷ್ಟು ನಡೆದರೂ  ಗಮ್ಯ ಸ್ಥಾನ  ಬಹುದೂರ .  ಕತ್ತಲಾಗುತ್ತಾ  ಬಂದಂತೆ  ಈ ಯುವಕನಿಗೆ  ದಾರಿ ಕಾಣುವುದು  ಕಷ್ಟವಾಗುತ್ತೆ . ಅಷ್ಟರಲ್ಲಿ ದೂರದಲ್ಲಿ ಯಾರೋ ಲಾಟೀನು ಹಿಡಿದ ವ್ಯಕಿ ಕಾಣುತ್ತಾರೆ . ಅವರಲ್ಲಿ ವಿಚಾರಿಸಿದರೆ  ಆತ  ರೈಲ್ವೆ ಟ್ರ್ಯಾಕ್  ಚೆಕ್ ಮಾಡುವ ವ್ಯಕ್ತಿ , ಬಾ ನನ್ನ ಜೊತೆ  ಎಂದು ಆತ  ಕೋಟೆಕಾರ್ ವರೆಗೆ ತಂದು ಬಿಡುವಾಗ ರಾತ್ರಿ 8 ಗಂಟೆ . ಕೊಂಡಾಣ ತಲುಪಲು ಇನ್ನೂ ಮೂರು km  ನಡೆಯುವದು ಬಾಕಿಯಿದೆ ಎಂದಾಗ  

Comments

Popular posts from this blog

ಈ ಸುದಿನ ನಿನ್ನ ಜನುಮದಿನ